‘ಆಕ್ರಮಣ’ ಪರಾಕ್ರಮ
Posted date: 04 Thu, Jul 2013 – 02:16:21 PM
ಹೌದು. ‘ಆಕ್ರಮಣ’ ಕನ್ನಡ ಸಿನೆಮಾ ಒಂದು ಪರಾಕ್ರಮ ಸಾದಿಸಿದ ಘಳಿಗೆ ಅಲ್ಲಿ ಇದೆ. ಚೊಚ್ಚಲ ನಿರ್ದೇಶನದಲ್ಲಿ ‘೩ಡಿ ಹಾಗೂ ೨ಡಿ’ ತಂತ್ರಜ್ಞಾನದ ಸಿನೆಮಾ ನಿರ್ದೇಶನ ಮಾಡಿದವರು ನಿರ್ದೇಶಕ ಪ್ರಾಶಾಂತ್ ಕುಮಾರ್ ಎನ್ ಅವರೇ ಮೊದಲು. ಈ ಚಿತ್ರದ ಇನ್ನಿಬ್ಬಿರು ನಿರ್ಮಾಪಕರಾದ ವಿಮಲ್ ಜೈನ್, ಸುರೇಶ್ ಜೈನ್, ಪರಮೇಶ್ ಜೊತೆ ಸೇರಿ ಪ್ರಶಾಂತ್ ಕುಮಾರ್ ಎನ್ ನಿರ್ಮಾಣ ಸಹ ಮಾಡುತ್ತಿದ್ದಾರೆ. 
ಚಿತ್ರೀಕರಣ ಮುಗಿಸಿ ಕೇವಲ ಒಂದು ಪಾತ್ರದ ಮಾತುಗಳ ಜೋಡಣೆ ಮಾತ್ರ ಇಟ್ಟುಕೊಂಡಿರುವ ‘ಆಕ್ರಮಣ’ ಮೈಸೂರಿನಲ್ಲಿ ಪ್ರಾರಂಭ ಆಗಿ ಮೈಸೂರಿನಲ್ಲಿ ಸಂಪೂರ್ಣಗೊಳಿಸಿದ ಚಿತ್ರ ಅಲ್ಲದೆ ಮೈಸೂರಿನ ಯುವಕ ಪ್ರಶಾಂತ್ ಕುಮಾರ್ ಎನ್ ಅವರ ಹಲವು ವರ್ಷಗಳ ಪ್ರಯತ್ನದ ಫಲ ಈ ‘ಆಕ್ರಮಣ’. ಬಿ. ಎಸ್. ಸಿ. ವ್ಯಾಸಂಗ ಮಾಡಿ, ಡಿಪ್ಲೋಮಾ ಇನ್ ಫಿಲ್ಮ್ ಡೈರಕ್ಷನ್ ಅಲ್ಲಿ ವ್ಯಾಸಂಗ ಮುಗಿಸಿ ಒಂದು ವರ್ಷ ಜರ್ನಲಿಸಂ ವಿಭಾಗದಲ್ಲಿ ತೊಡಗಿಸಿಕೊಂಡ ಪ್ರಶಾಂತ್ ಕುಮಾರ್ ಆಮೇಲೆ ಐದು ವರ್ಷಗಳ ಕಾಲ ನಿರ್ದೇಶಕ ನಾಗಣ್ಣ, ಸುರೇಶ್ ಕೃಷ್ಣ ಅವರ ಬಳಿ ತಯಾರಿ ಪಡೆದವರು.
ಕನ್ನಡದಲ್ಲಿ ತಯಾರಾದ ‘ಕಠಾರಿ ವೀರ ಸುರ ಸುಂದರಂಗಿ’ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಿರುವಾಗಲೇ ಇವರಿಗೆ ರತೀಶ್ ಕುಮಾರ್ ಅವರ ಪರಿಚಯ ಆಗಿ ೩ಡಿ ಹಾಗೂ ೨ಡಿ ತಂತ್ರಜ್ಞಾನದಲ್ಲಿ ಸಿನೆಮಾ ಮಾಡುವುದು ಮೊಳಕೆ ಒಡದಿದ್ದು. ಮೈಸೂರು, ಮಡಿಕೇರಿ, ಕಾಸರಗೊಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೊಂದು ಸಾಹಸ ಹಾಗೂ ಹಾರರ್ ತುಂಬಿರುವ ಚಿತ್ರ ಎಂದು ನಿರ್ದೇಶಕ ಪ್ರಶಂತ್ಕುಮಾರ್ ತಿಳಿಸುತ್ತಾರೆ.  

‘ಆಕ್ರಮಣ’ ಚಿತ್ರದಲ್ಲಿ ೧೫ ರಿಂದ ೨೦ ನಿಮಿಷಗಳ ಕಾಲ ಗ್ರಾಫಿಕ್ಸ್ ಅಳವಡಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಅನ್ನು ನಿರ್ಮಾಪಕರುಗಳು ಇಟ್ಟುಕೊಂಡಿದ್ದಾರೆ. 

ಚೆನ್ನೈ ಅಲ್ಲಿ ಬಾಲ ಅವರು ೩ಡಿ ಗಾಗಿ, ಬೆಂಗಳೂರಿನಲ್ಲಿ ಜೀವನ್ ಅವರು ೨ಡಿ ತಂತ್ರಜ್ಞಾನದ ಸಂಕಲನದ ನೇತೃತ್ವದಲ್ಲಿ ಈ ಚಿತ್ರಕ್ಕೆ ಮತ್ತಷ್ಟು ಸೊಬಗು ಅಣಿಯಾಗುತ್ತಿದೆ. ಕಾರ್ಯಕಾರಿ ನಿರ್ಮಾಪಕರಿ ಸುನಿಲ್ ಆರ್, ಸತೀಶ್ ಆರ್ಯನ್ ಅವರ ಸಂಗೀತ, ಕೆ ಜಿ ರತೀಶ್ ಅವರು ಛಾಯಾಗ್ರಾಹಕರು, ಓಸ್ಕರ್ ಅಭಿಶೇಖ್, ಲಲಿತ ರಾಜ್ ವಿನಾಯಕ್, ಆದರ್ಶ್ ಎಂ ಎನ್ ಸಂಭಾಷಣೆ ಬರೆದಿದ್ದಾರೆ, ಶಂಕರ್, ಮಂಜುನಾಥ ರಾವು, ಆದರ್ಶ್, ಸತೀಶ್ ಆರ್ಯನ್ ಆವರ ಗೀತ ಸಾಹಿತ್ಯವಿದೆ. ದೀಪಕ್ ಅವರ ನೃತ್ಯ ನಿರ್ದೇಶನ, ಕೆ ಡಿ ವೆಂಕಟೇಶ್ ಅಂಡ್ ರಾಜೇಶ್ ಕಣ್ಣನ್ ಅವರ ಸಾಹಸ , ಸಹಾಯಕ ನಿರ್ದೇಶಕರಾಗಿ ಆದರ್ಶ, ಲಲಿತ ರಾಜ್ ವಿನಾಯಕ್, ಸಂಜೋತ ಅವರ ಸಹಾಯಕ ನಿರ್ದೇಶನ ಇದೆ.        
ತಾರಾಗಣದಲ್ಲಿ ಖಾಕಿ ತೊಟ್ಟ ಅಧಿಕಾರಿಯಾಗಿ ರಘು ಮುಕರ್ಜಿ, ಡೈಸಿ ಶಾಹ್, ಶಿಲ್ಪಿ ಶರ್ಮ, ಮಕರಂಡ್ ದೇಶ್ಪಾಂಡೆ, ಅವಿನಾಷ್, ಸಿದ್ಲಿಂಗು ಶ್ರೀಧರ್, ಸುದರ್ಶನ್, ರಮೇಶ್ ಪಂಡಿತ್, ಡ್ಯಾನಿ ಕುಟ್ಟಪ್ಪ, ಮಾರ್ಕೊ, ಪ್ರಕಾಷ್ ಶೆಣೈ,  ಕಿಶೋರಿ ಬಲ್ಲಾಳ್ ಹಾಗೂ ಇತರರು ಇದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed